ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ - ಕನ್ನಡ ಲಿಪಿ Kannada

 Home / Poshan Videos / ಕನ್ನಡ ಲಿಪಿ / ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ



Previous     Next

Download for Laptop | Tablet | SmartPhone | BasicPhone

Install HealthPhone Poshan Mobile App in Kannada

Install Poshan Kannada mobile app

This app works offline; all videos are included within the app.

ಪ್ರಸವಪೂರ್ವ: ಗರ್ಭಾವಸ್ಥೆಯಲ್ಲಿ ಆರೈಕೆ - ಕನ್ನಡ ಲಿಪಿ Kannada

ಗರ್ಭಧಾರಣೆಯ ಸಮಯದಲ್ಲಿ, ತಮ್ಮ ಮತ್ತು ತಮ್ಮ ಮಗುವಿನ ಆರೈಕೆ ಮಾಡಿಕೊಳ್ಳಲು ಮಹಿಳೆಯರಿಗೆ ಸಲಹೆಗಳು ಹಾಗೂ ಗರ್ಭಧಾರಣೆಯ ಮೊದಲು, ಗರ್ಭಧಾರಣೆಯ ಸಂದರ್ಭದಲ್ಲಿ ಹಾಗೂ ನಂತರ ಉತ್ತಮ ಆರೈಕೆಯನ್ನು ಪಡೆಯುವ ಪ್ರಾಮುಖ್ಯತೆ.

ಗರ್ಭಾವಸ್ಥೆಯಲ್ಲಿ ಪ್ರಸವಪೂರ್ವ ಆರೈಕೆಯು ಭಾವೀ ತಾಯಿಯ ಮತ್ತು ಅಜಾತ ಶಿಶುವಿನ ಯೋಗಕ್ಷೇಮಗಳಿಗೆ ನೇರವಾಗಿ ಸಂಬಂಧಿಸಿದೆ.

ಗರ್ಭಧಾರಣೆಯ ಬಗ್ಗೆ ತಿಳಿದ ತಕ್ಷಣ ಭಾವೀ ತಂದೆತಾಯಿಯರು ತಕ್ಷಣ ಅಂಗನವಾಡಿಗೆ ಭೇಟಿ ನೀಡಬೇಕು ಮತ್ತು ತಾಯಿ ಮತ್ತು ಮಗುವಿನ ರಕ್ಷಣೆಯ ಕಾರ್ಡ್ ಅನ್ನು ಪಡೆಯಬೇಕು; ಇದು ಮಗುವಿನ ಪೋಷಣೆ ಮತ್ತು ಬೆಳವಣಿಗೆಯ ಮೇಲ್ವಿಚಾರಣೆ ಮಾಡಲು ಅವರಿಗೆ ಸಹಾಯ ಮಾಡುವ ಸರಳ ಹಾಗೂ ಶಕ್ತಿಶಾಲಿ ಕಾರ್ಡ್ ಆಗಿದೆ.

ಭಾರತದಲ್ಲಿ 75% ಹೊಸ ತಾಯಂದಿರು ರಕ್ತಹೀನತೆಯನ್ನು ಹೊಂದಿರುತ್ತಾರೆ ಹಾಗೂ ಬಹಳಷ್ಟು ಜನರು ಗರ್ಭಾವಸ್ಥೆಯಲ್ಲಿ ಅವರು ಹೊಂದಬೇಕಾಗಿರುವುದಕ್ಕಿಂತ ಕಡಿಮೆ ತೂಕ ಹೊಂದುತ್ತಾರೆ.

ಈ ಶಿಶುಗಳಲ್ಲಿ ಅನಾರೋಗ್ಯಕರ ಭ್ರೂಣದ ಬೆಳವಣಿಗೆ, ಕಡಿಮೆ ಜನನದ ತೂಕ ಮತ್ತು ಆನುವಂಶಿಕವಲ್ಲದ ಜನ್ಮಜಾತ ಅಸಹಜತೆಗಳಿಗೆ ಕಾರಣವಾಗುತ್ತದೆ.

ಗರ್ಭಾವಸ್ಥೆಯಲ್ಲಿ, ಭಾವೀ ತಾಯಿ ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಪಡೆಯುತ್ತಾರೆಂದು ಖಚಿತಪಡಿಸಿಕೊಳ್ಳಿ.

ಅವರು ಸಾಮಾನ್ಯಕ್ಕಿಂತ ಕಾಲು ಭಾಗ ಹೆಚ್ಚು ಆಹಾರ ಸೇವಿಸಬೇಕು.

ಭಾವೀ ತಾಯಿ ಹಗಲಿನಲ್ಲಿ ಕನಿಷ್ಠ ಎರಡು ಗಂಟೆಗಳ ವಿಶ್ರಾಂತಿ ಪಡೆಯಬೇಕು.

ಮತ್ತು ರಾತ್ರಿ, ಅವಳು ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು.

ಅಲ್ಲದೆ, ಮನೆಯಲ್ಲಿ ಸಂತೋಷದ ವಾತಾವರಣವಿರಬೇಕು.

ಈ ವೀಡಿಯೊದ ಉದ್ದೇಶ ಅಪೌಷ್ಟಿಕತೆಯ ಚಿಹ್ನೆಗಳು ಮತ್ತು ಅಪಾಯಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳಿಗೆ ಕ್ರಮ ತೆಗೆದುಕೊಳ್ಳಲು ಉತ್ತೇಜನ ನೀಡುವುದಾಗಿದೆ ಹಾಗೂ ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮಾಡಬಹುದಾದ ಸರಳ ವಿಷಯಗಳ ಬಗ್ಗೆ ವಿವರಿಸುತ್ತದೆ.

ಇದು ಸಮುದಾಯದವರಿಗಾಗಿ ಉದ್ದೇಶಿಸಲಾಗಿದೆ.

ನಿರ್ಮಿಸಿದವರು: ಯುನಿಸೆಫ್ ಮತ್ತು ಇತರ ಅಭಿವೃದ್ಧಿ ಪಾಲುದಾರರ ಸಕ್ರಿಯ ಬೆಂಬಲದ ಜೊತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ.

 
  • Indian Academny of Pediatrics
  • HealthPhone
  • Vodafone India
  • Ministry of Women and Child Development
  • UNICEF India

About IAP HealthPhone

An initiative of HealthPhone™, conducted under the aegis of Indian Academy of Pediatrics, in partnership with the Ministry of Women and Child Development, UNICEF, Aamir Khan and with support from Vodafone.

The objective of this nationwide campaign against malnutrition is to address issues of status of women, the care of pregnant mothers and children under two, breastfeeding and the importance of balanced nutrition and health. The focus is on women between 13 and 35 years of age and their family members.


Read more