ಅಪೌಷ್ಟಿಕತೆಯನ್ನು ತಡೆಗಟ್ಟಲು ಪ್ರತಿಜ್ಞೆ ಮಾಡಿ - ಕನ್ನಡ ಲಿಪಿ Kannada

 Home / Poshan Videos / ಕನ್ನಡ ಲಿಪಿ / ಅಪೌಷ್ಟಿಕತೆಯನ್ನು ತಡೆಗಟ್ಟಲು ಪ್ರತಿಜ್ಞೆ ಮಾಡಿPrevious

Download for Laptop | Tablet | SmartPhone | BasicPhone

Install HealthPhone Poshan Mobile App in Kannada

Install Poshan Kannada mobile app

This app works offline; all videos are included within the app.

ಅಪೌಷ್ಟಿಕತೆಯನ್ನು ತಡೆಗಟ್ಟಲು ಪ್ರತಿಜ್ಞೆ ಮಾಡಿ - ಕನ್ನಡ ಲಿಪಿ Kannada

ಮಹಿಳೆಯರು ತಮ್ಮ ಸೊಸೆ ತಾಯಿಯಾಗುವಾಗ ಅವರು ಅವಳ ಆರಾಮದ ಸಂಪೂರ್ಣ ಆರೈಕೆ ಮಾಡುತ್ತಾರೆ, ಅವಳಿಗೆ ಹಸಿರು ಎಲೆಗಳ ತರಕಾರಿಗಳು, ಕಾಳುಗಳು, ಮೊಟ್ಟೆಗಳು, ಹಾಲು ಮತ್ತು ಹಣ್ಣುಗಳಂಥ ಪೌಷ್ಟಿಕ ಆಹಾರಗಳನ್ನು ಉತ್ತಮ ಪ್ರಮಾಣದಲ್ಲಿ ನೀಡಬೇಕು.

ಅವರು ಐಯೊಡೀನ್‌ಯುಕ್ತ ಉಪ್ಪಿನ ಜೊತೆ ಬೇಯಿಸಿದ ಆಹಾರವನ್ನು ಅವಳಿಗೆ ನೀಡಬೇಕು ಮತ್ತು ಅವಳಿಗೆ ಐರನ್ ಫೋಲಿಕ್ ಆಸಿಡ್ ಮಾತ್ರೆಗಳನ್ನು ನೀಡಬೇಕು.

ಯುವಕರು ಗರ್ಭಾವಸ್ಥೆಯಲ್ಲಿ ಅವರ ಪತ್ನಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರತಿಜ್ಞೆ ಮಾಡಬೇಕು.

ಅವಳು ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ಮತ್ತು ಅವಳು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.

ಏಳನೇ ತಿಂಗಳಿಂದ, ಅವರು ತನ್ನ ಮಗು ಮನೆಯಲ್ಲಿ ಬೇಯಿಸಿದ ವೈವಿಧ್ಯಮಯ ಪೌಷ್ಟಿಕ ಆಹಾರಗಳ ಜೊತೆಗೆ ಎದೆಹಾಲು ಕುಡಿಯುವುದನ್ನೂ ಮುಂದುವರೆಸುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು.

ಮಹಿಳೆಯರು ತಮ್ಮ ನವಜಾತ ಶಿಶುವಿಗೆ ತಮ್ಮ ಮೊದಲ ದಪ್ಪ ಹಾಲನ್ನು (ಪ್ರಥಮಸ್ತನ್ಯ) ನೀಡುತ್ತಾರೆ ಹಾಗೂ ಮೊದಲ ಆರು ತಿಂಗಳ ಕಾಲ ಅವರು ತಮ್ಮ ಮಗುವಿಗೆ ಕೇವಲ ಸ್ತನ್ಯಪಾನ ಮಾಡಿಸುತ್ತಾರೆ ಎಂದು ಪ್ರತಿಜ್ಞೆ ಮಾಡಬೇಕು.

ಅವರ ಮಗು ಏಳನೇ ತಿಂಗಳಿಗೆ ಬಂದಾಗ, ಅವರ ಎದೆಹಾಲಿನ ಜೊತೆಗೆ, ಅವರು ಆಹಾರದಲ್ಲಿ ಮನೆಯಲ್ಲಿ ಬೇಯಿಸಿದ ಆರೋಗ್ಯಕರ ಆಹಾರವನ್ನೂ ನೀಡಬೇಕು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯು ತಾಯಿ ಎಂಬ ಜವಾಬ್ದಾರಿಯನ್ನು ಹೊರಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಳಿರುವುದಿಲ್ಲ.

ಅಂತಹ ಸಂದರ್ಭಗಳಲ್ಲಿ, ಅವಳ ಮಗು ಯಾವತ್ತೂ ಅಪೌಷ್ಟಿಕತೆಯ ಅಪಾಯಕ್ಕೆ ಒಡ್ಡಲ್ಪಡುವ ಸಾಧ್ಯತೆಯಿರುತ್ತದೆ.

ಅದಕ್ಕೇ ನಿಮ್ಮ ಮಗಳಿಗೆ ಕನಿಷ್ಠ 18 ವರ್ಷವಾಗುವರೆಗೂ ಅವಳ ಮದುವೆ ಮಾಡುವ ವಿಚಾರವನ್ನೂ ಮಾಡಬೇಡಿ.

ತಂದೆತಾಯಿಗಳು ಅವರ ಮಗಳಿಗೆ 18 ವರ್ಷಗಳಾಗುವವರೆಗೂ ಮದುವೆ ಮಾಡುವುದಿಲ್ಲವೆಂದು ಪಣ ತೊಡಬೇಕು.

ಮತ್ತು ಆ ಮೂಲಕ ಅವರು ಅವಳ ಭವಿಷ್ಯದ ಮಗು ಅಪೌಷ್ಟಿಕತೆಯಿಂದ ಮುಕ್ತವಾಗಿರುತ್ತದೆಂದು ಖಚಿತಪಡಿಸಿಕೊಳ್ಳುತ್ತಾರೆ.

ಯುವಕರು ತಮ್ಮ ಭವಿಷ್ಯದ ಮಗು ಅಪೌಷ್ಟಿಕತೆಯಿಂದ ರಕ್ಷಿಸಲ್ಪಡುತ್ತದೆಂದು ಖಚಿತಪಡಿಸಿಕೊಳ್ಳಲು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಹುಡುಗಿಯನ್ನು ಮದುವೆಯಾಗುವುದಿಲ್ಲವೆಂದು ಪಣ ತೊಡಬೇಕು.

ಸರಪಂಚರು (ಒಂದು ಗ್ರಾಮದ ಮಹಿಳಾ ಮುಖ್ಯಸ್ಥೆ) ತನ್ನ ಹಳ್ಳಿಯಲ್ಲಿನ ಯಾವ ಮಗುವೂ ಅಪೌಷ್ಟಿಕತೆ ನರಳುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ತನ್ನ ಗ್ರಾಮದಲ್ಲಿ 18 ವರ್ಷದ ಕೆಳಗಿನ ಯಾವುದೇ ಹುಡುಗಿಯ ಮದುವೆಯನ್ನು ತಡೆಗಟ್ಟಲು ಪಣ ತೊಡಬೇಕು.

ಈ ವೀಡಿಯೊದ ಉದ್ದೇಶ ಅಪೌಷ್ಟಿಕತೆಯ ಚಿಹ್ನೆಗಳು ಮತ್ತು ಅಪಾಯಕಾರಿ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳಿಗೆ ಕ್ರಮ ತೆಗೆದುಕೊಳ್ಳಲು ಉತ್ತೇಜನ ನೀಡುವುದಾಗಿದೆ ಹಾಗೂ ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮಾಡಬಹುದಾದ ಸರಳ ವಿಷಯಗಳ ಬಗ್ಗೆ ವಿವರಿಸುತ್ತದೆ.

ಇದು ಸಮುದಾಯದವರಿಗಾಗಿ ಉದ್ದೇಶಿಸಲಾಗಿದೆ.

ನಿರ್ಮಿಸಿದವರು: ಯುನಿಸೆಫ್ ಮತ್ತು ಇತರ ಅಭಿವೃದ್ಧಿ ಪಾಲುದಾರರ ಸಕ್ರಿಯ ಬೆಂಬಲದ ಜೊತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ.

 
  • Indian Academny of Pediatrics
  • HealthPhone
  • Vodafone India
  • Ministry of Women and Child Development
  • UNICEF India

About IAP HealthPhone

An initiative of HealthPhone™, conducted under the aegis of Indian Academy of Pediatrics, in partnership with the Ministry of Women and Child Development, UNICEF, Aamir Khan and with support from Vodafone.

The objective of this nationwide campaign against malnutrition is to address issues of status of women, the care of pregnant mothers and children under two, breastfeeding and the importance of balanced nutrition and health. The focus is on women between 13 and 35 years of age and their family members.


Read more